ಮುಖಪುಟ ನಮ್ಮನ್ನು ಸಂಪರ್ಕಿಸಿ
ಕನ್ನಡ
  • KJV
  • தமிழ்
  • తెలుగు
  • हिन्दी
ಯೋನ
  • ಆದಿಕಾಂಡ
  • ವಿಮೋಚನಕಾಂಡ
  • ಯಾಜಕಕಾಂಡ
  • ಅರಣ್ಯಕಾಂಡ
  • ಧರ್ಮೋಪದೇಶಕಾಂಡ
  • ಯೆಹೋಶುವ
  • ನ್ಯಾಯಸ್ಥಾಪಕರು
  • ರೂತಳು
  • ೧ ಸಮುವೇಲನು
  • ೨ ಸಮುವೇಲನು
  • ೧ ಅರಸುಗಳು
  • ೨ ಅರಸುಗಳು
  • ೧ ಪೂರ್ವಕಾಲವೃತ್ತಾಂತ
  • ೨ ಪೂರ್ವಕಾಲವೃತ್ತಾಂತ
  • ಎಜ್ರನು
  • ನೆಹೆಮಿಯ
  • ಎಸ್ತೇರಳು
  • ಯೋಬನು
  • ಕೀರ್ತನೆಗಳು
  • ಙ್ಞಾನೋಕ್ತಿಗಳು
  • ಪ್ರಸಂಗಿ
  • ಪರಮ ಗೀತ
  • ಯೆಶಾಯ
  • ಯೆರೆಮಿಯ
  • ಪ್ರಲಾಪಗಳು
  • ಯೆಹೆಜ್ಕೇಲನು
  • ದಾನಿಯೇಲನು
  • ಹೋಶೇ
  • ಯೋವೇಲ
  • ಆಮೋಸ
  • ಓಬದ್ಯ
  • ಯೋನ
  • ಮಿಕ
  • ನಹೂಮ
  • ಹಬಕ್ಕೂಕ್ಕ
  • ಚೆಫನ್ಯ
  • ಹಗ್ಗಾಯ
  • ಜೆಕರ್ಯ
  • ಮಲಾಕಿಯ
  • ಮತ್ತಾಯನು
  • ಮಾರ್ಕನು
  • ಲೂಕನು
  • ಯೋಹಾನನು
  • ಅಪೊಸ್ತಲರ ಕೃತ್ಯಗಳು
  • ರೋಮಾಪುರದವರಿಗೆ
  • ೧ ಕೊರಿಂಥದವರಿಗೆ
  • ೨ ಕೊರಿಂಥದವರಿಗೆ
  • ಗಲಾತ್ಯದವರಿಗೆ
  • ಎಫೆಸದವರಿಗೆ
  • ಫಿಲಿಪ್ಪಿಯವರಿಗೆ
  • ಕೊಲೊಸ್ಸೆಯವರಿಗೆ
  • ೧ ಥೆಸಲೊನೀಕದವರಿಗೆ
  • ೨ ಥೆಸಲೊನೀಕದವರಿಗೆ
  • ೧ ತಿಮೊಥೆಯನಿಗೆ
  • ೨ ತಿಮೊಥೆಯನಿಗೆ
  • ತೀತನಿಗೆ
  • ಫಿಲೆಮೋನನಿಗೆ
  • ಇಬ್ರಿಯರಿಗೆ
  • ಯಾಕೋಬನು
  • ೧ ಪೇತ್ರನು
  • ೨ ಪೇತ್ರನು
  • ೧ ಯೋಹಾನನು
  • ೨ ಯೋಹಾನನು
  • ೩ ಯೋಹಾನನು
  • ಯೂದನು
  • ಪ್ರಕಟನೆ
4
  • 1
  • 2
  • 3
  • 4
1 ಆದರೆ ಅದು ಯೋನನಿಗೆ ತುಂಬಾಕರೆಕರೆಯಾಗಿ ಅವನಿಗೆ ಬಹು ಕೋಪ ಬಂತು.
2 ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಓ ಕರ್ತನೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನೇ ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು; ನೀನು ಕರುಣೆಯೂ ಕನಿಕರವೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳದೇವರೆಂದೂ ಕೇಡಿನ ವಿಷಯವಾಗಿ ಪಶ್ಚಾತ್ತಾಪ ಪಡುವಾತನೆಂದೂ ನನಗೆ ತಿಳಿದಿತ್ತು.
3 ಆದದರಿಂದ ಓ ಕರ್ತನೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆ; ನಾನು ಬದುಕುವ ದಕ್ಕಿಂತ ಸಾಯುವದು ಒಳ್ಳೇದು ಅಂದನು.
4 ಆಗ ಕರ್ತನು -- ನೀನು ಕೋಪಮಾಡಿಕೊಳ್ಳುವದು ಒಳ್ಳೇದೋ ಎಂದು ಅವನಿಗೆ ಹೇಳಿದನು.
5 ಆಗ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣ ಕಡೆಯಲ್ಲಿ ಕೂತುಕೊಂಡು ಗುಡಿಸಲನ್ನು ಮಾಡಿಕೊಂಡು ಪಟ್ಟಣದಲ್ಲಿ ಏನಾಗುವದೆಂದು ನೋಡುವ ವರೆಗೆ ಅದರ ನೆರಳಿನಲ್ಲಿ ಕೂತುಕೊಂಡನು.
6 ದೇವರಾದ ಕರ್ತನು ಒಂದು ಸೋರೇ ಗಿಡವನ್ನು ಎಬ್ಬಿಸಿ, ಅದು ಯೋನನ ಮೇಲೆ ಹಬ್ಬಿ ಬಂದು ಅವನ ತಲೆಯ ಮೇಲೆ ನೆರಳುಕೊಟ್ಟು ಅವನ ದುಃಖದಿಂದ ಅವನನ್ನು ಬಿಡಿಸುವಂತೆ ಮಾಡಿದನು: ಯೋನನು ಆ ಸೋರೇ ಗಿಡದ ವಿಷಯವಾಗಿ ಬಹಳ ಸಂತೋಷಪಟ್ಟನು.
7 ಆದರೆ ಮಾರನೇ ದಿನದಲ್ಲಿ ಉದಯವಾದಾಗ ದೇವರು ಒಂದು ಹುಳವನ್ನು ಸಿದ್ಧಮಾಡಿದನು; ಅದು ಸೋರೇ ಗಿಡವನ್ನು ಒಣಗುವ ಹಾಗೆ ಹೊಡೆಯಿತು.
8 ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.
9 ಆಗ ದೇವರು ಯೋನನಿಗೆ--ನೀನು ಸೋರೇ ಗಿಡವನ್ನು ಕುರಿತು ಕೋಪಮಾಡುವದು ಒಳ್ಳೇದೋ ಅಂದನು. ಅವನು --ನಾನು ಸಾಯುವಷ್ಟು ಕೋಪಮಾಡುವದು ಒಳ್ಳೇದೇ ಅಂದನು.
10 ಆಗ ಕರ್ತನು ಹೇಳಿದ್ದೇನಂದರೆ--ನೀನು ಕಷ್ಟಪಡದಂಥ, ಬೆಳೆಸದಂಥ, ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶನವಾದಂಥ,
11 ಆ ಸೋರೇಗಿಡದ ಮೇಲೆ ಕನಿಕರ ಪಟ್ಟಿಯಲ್ಲಾ, ಹಾಗಾ ದರೆ ಎಡ ಬಲ ಕೈಗಳನ್ನು ತಿಳಿಯದವರಾದ ಲಕ್ಷ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು, ಬಹಳ ದನ ಗಳು ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆ ಯನ್ನು ನಾನು ಕನಿಕರಿಸಬಾರದೋ ಅಂದನು.
‹
© 2025 DailyManna.co.in. All rights reserved.