ಮುಖಪುಟ ನಮ್ಮನ್ನು ಸಂಪರ್ಕಿಸಿ
ಕನ್ನಡ
  • KJV
  • தமிழ்
  • తెలుగు
  • हिन्दी
ಪ್ರಸಂಗಿ
  • ಆದಿಕಾಂಡ
  • ವಿಮೋಚನಕಾಂಡ
  • ಯಾಜಕಕಾಂಡ
  • ಅರಣ್ಯಕಾಂಡ
  • ಧರ್ಮೋಪದೇಶಕಾಂಡ
  • ಯೆಹೋಶುವ
  • ನ್ಯಾಯಸ್ಥಾಪಕರು
  • ರೂತಳು
  • ೧ ಸಮುವೇಲನು
  • ೨ ಸಮುವೇಲನು
  • ೧ ಅರಸುಗಳು
  • ೨ ಅರಸುಗಳು
  • ೧ ಪೂರ್ವಕಾಲವೃತ್ತಾಂತ
  • ೨ ಪೂರ್ವಕಾಲವೃತ್ತಾಂತ
  • ಎಜ್ರನು
  • ನೆಹೆಮಿಯ
  • ಎಸ್ತೇರಳು
  • ಯೋಬನು
  • ಕೀರ್ತನೆಗಳು
  • ಙ್ಞಾನೋಕ್ತಿಗಳು
  • ಪ್ರಸಂಗಿ
  • ಪರಮ ಗೀತ
  • ಯೆಶಾಯ
  • ಯೆರೆಮಿಯ
  • ಪ್ರಲಾಪಗಳು
  • ಯೆಹೆಜ್ಕೇಲನು
  • ದಾನಿಯೇಲನು
  • ಹೋಶೇ
  • ಯೋವೇಲ
  • ಆಮೋಸ
  • ಓಬದ್ಯ
  • ಯೋನ
  • ಮಿಕ
  • ನಹೂಮ
  • ಹಬಕ್ಕೂಕ್ಕ
  • ಚೆಫನ್ಯ
  • ಹಗ್ಗಾಯ
  • ಜೆಕರ್ಯ
  • ಮಲಾಕಿಯ
  • ಮತ್ತಾಯನು
  • ಮಾರ್ಕನು
  • ಲೂಕನು
  • ಯೋಹಾನನು
  • ಅಪೊಸ್ತಲರ ಕೃತ್ಯಗಳು
  • ರೋಮಾಪುರದವರಿಗೆ
  • ೧ ಕೊರಿಂಥದವರಿಗೆ
  • ೨ ಕೊರಿಂಥದವರಿಗೆ
  • ಗಲಾತ್ಯದವರಿಗೆ
  • ಎಫೆಸದವರಿಗೆ
  • ಫಿಲಿಪ್ಪಿಯವರಿಗೆ
  • ಕೊಲೊಸ್ಸೆಯವರಿಗೆ
  • ೧ ಥೆಸಲೊನೀಕದವರಿಗೆ
  • ೨ ಥೆಸಲೊನೀಕದವರಿಗೆ
  • ೧ ತಿಮೊಥೆಯನಿಗೆ
  • ೨ ತಿಮೊಥೆಯನಿಗೆ
  • ತೀತನಿಗೆ
  • ಫಿಲೆಮೋನನಿಗೆ
  • ಇಬ್ರಿಯರಿಗೆ
  • ಯಾಕೋಬನು
  • ೧ ಪೇತ್ರನು
  • ೨ ಪೇತ್ರನು
  • ೧ ಯೋಹಾನನು
  • ೨ ಯೋಹಾನನು
  • ೩ ಯೋಹಾನನು
  • ಯೂದನು
  • ಪ್ರಕಟನೆ
1
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
1 ದಾವೀದನ ಮಗನೂ ಯೆರೂಸಲೇಮಿನಲ್ಲಿ ಅರಸನೂ ಆಗಿದ್ದ ಪ್ರಸಂಗಿಯ ಮಾತುಗಳು.
2 ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥಗಳಲ್ಲಿ ವ್ಯರ್ಥ ಎಂದು ಪ್ರಸಂಗಿ ಹೇಳುತ್ತಾನೆ; ಎಲ್ಲವೂ ವ್ಯರ್ಥ.
3 ಸೂರ್ಯನ ಕೆಳಗೆ ಮನುಷ್ಯನು ಪಡುವ ಎಲ್ಲಾ ಪ್ರಯಾಸದಲ್ಲಿ ಅವನಿಗೆ ಲಾಭವೇನು?
4 ಒಂದು ಸಂತಾನವು ಗತಿಸುತ್ತದೆ, ಮತ್ತೊಂದು ಸಂತಾನವು ಬರುತ್ತದೆ; ಆದರೆ ಭೂಮಿಯು ಎಂದಿಗೂ ನಿಲ್ಲುತ್ತದೆ.
5 ಸೂರ್ಯನು ಏರುತ್ತಾನೆ, ಸೂರ್ಯನು ಇಳಿಯುತ್ತಾನೆ; ತಾನು ಏರಿದ ಸ್ಥಳಕ್ಕೆ ಆತುರಪಡುತ್ತಾನೆ.
6 ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ; ಅದು ಬಿಡದೆ ಗುಂಡಾಗಿ ಸುತ್ತುತ್ತದೆ; ಆ ಗಾಳಿಯು ತನ್ನ ಸುತ್ತಳತೆಗಳ ಪ್ರಕಾರ ಹಿಂದಿರು ಗುತ್ತದೆ.
7 ನದಿಗಳೆಲ್ಲಾ ಹರಿದು ಸಮುದ್ರಕ್ಕೆ ಹೋಗುತ್ತವೆ, ಆದರೂ ಸಮುದ್ರವು ತುಂಬುವದಿಲ್ಲ; ನದಿ ಗಳು ಎಲ್ಲಿಂದ ಬಂದಿವೆಯೋ ಆ ಸ್ಥಳಕ್ಕೆ ಅವು ಹಿಂತಿರು ಗುತ್ತವೆ.
8 ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿ ಯವೆ; ಅದನ್ನು ಮನುಷ್ಯನು ವಿವರಿಸಲಾರನು; ನೋಡುವದರಿಂದ ಕಣ್ಣು ತೃಪ್ತಿಗೊಳ್ಳದು. ಇಲ್ಲವೆ ಕೇಳು ವದರಿಂದ ಕಿವಿಯು ದಣಿಯದು.
9 ಇದ್ದದ್ದೇ ಇರು ವದು, ನಡೆದದ್ದೇ ನಡೆಯುವದು; ಸೂರ್ಯನ ಕೆಳಗೆ ಹೊಸದಾದದ್ದು ಯಾವದೂ ಇಲ್ಲ.
10 ನೋಡು, ಇದು ಹೊಸದು ಎಂದು ಯಾವ ವಿಷಯವಾಗಿ ಹೇಳ ಬಹುದೋ ಅದು ನಮಗಿಂತ ಮುಂಚೆ ಪುರಾತನ ಕಾಲದಿಂದ ಇದ್ದದ್ದೇ.
11 ಮೊದಲಿನ ಸಂಗತಿಗಳ ಜ್ಞಾಪ ಕವು ಇಲ್ಲ; ಮುಂದಿನ ಸಂಗತಿಗಳ ಜ್ಞಾಪಕವು ಅವುಗಳ ಮುಂದಿನವರಿಗೆ ಇರುವದಿಲ್ಲ.
12 ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರ ಮೇಲೆ ಅರಸನಾಗಿದ್ದೆನು.
13 ಆಕಾಶದ ಕೆಳಗೆ ನಡೆಯುವ ಎಲ್ಲವುಗಳ ವಿಷಯವಾಗಿ ಜ್ಞಾನ ದಿಂದ ವಿಚಾರಿಸಿ ವಿಮರ್ಶಿಸುವದಕ್ಕೆ ನಾನು ನನ್ನ ಮನಸ್ಸು ಇಟ್ಟೆನು; ಇದರ ವಿಷಯವಾದ ಪ್ರಯಾಸವು ಮನಸ್ಸಿನಲ್ಲಿ ಯೋಚಿಸುವಂತೆ ದೇವರು ಮನುಷ್ಯ ಮಕ್ಕಳಿಗೆ ಈ ಕಷ್ಟಕರವಾದ ಪ್ರಯಾಸವನ್ನು ಕೊಟ್ಟಿ ದ್ದಾನೆ.
14 ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ; ಇಗೋ, ಎಲ್ಲವು ವ್ಯರ್ಥವೂ ಮನಸ್ಸಿಗೆ ಆಯಾಸವೂ ಆಗಿವೆ.
15 ವಕ್ರ ವಾದದ್ದು ಸರಿಮಾಡುವದಕ್ಕೆ ಆಗುವದಿಲ್ಲ; ಇಲ್ಲದ್ದನ್ನು ಲೆಕ್ಕಿಸುವದು ಅಸಾಧ್ಯ.
16 ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ--ಇಗೋ, ನಾನು ದೊಡ್ಡ ಸ್ಥಾನಕ್ಕೆ ಬಂದಿದ್ದೇನೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದವರೆಲ್ಲರಿಗಿಂತ ನಾನು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ತಿಳುವಳಿಕೆಯ ದೊಡ್ಡ ಅನುಭವವು ನನ್ನ ಹೃದಯಕ್ಕೆ ಆಯಿತು ಎಂದು ಹೇಳಿದೆನು.
17 ಜ್ಞಾನ ವನ್ನೂ ಹುಚ್ಚುತನವನ್ನೂ ಬುದ್ಧಿಹೀನತೆಯನ್ನೂ ತಿಳು ಕೊಳ್ಳುವಂತೆ ನಾನು ಮನಸ್ಸಿಟ್ಟೆನು; ಇದು ಸಹ ಮನಸ್ಸಿಗೆ ಆಯಾಸವೆಂದು ನಾನು ಅರಿತುಕೊಂಡೆನು.
18 ಬಹು ಜ್ಞಾನವಿದ್ದಲ್ಲಿ ದುಃಖ; ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳು ವವನು ತನ್ನ ವ್ಯಥೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.
›
© 2025 DailyManna.co.in. All rights reserved.