ಮುಖಪುಟ ನಮ್ಮನ್ನು ಸಂಪರ್ಕಿಸಿ
ಕನ್ನಡ
  • KJV
  • தமிழ்
  • తెలుగు
  • हिन्दी
ಹೋಶೇ
  • ಆದಿಕಾಂಡ
  • ವಿಮೋಚನಕಾಂಡ
  • ಯಾಜಕಕಾಂಡ
  • ಅರಣ್ಯಕಾಂಡ
  • ಧರ್ಮೋಪದೇಶಕಾಂಡ
  • ಯೆಹೋಶುವ
  • ನ್ಯಾಯಸ್ಥಾಪಕರು
  • ರೂತಳು
  • ೧ ಸಮುವೇಲನು
  • ೨ ಸಮುವೇಲನು
  • ೧ ಅರಸುಗಳು
  • ೨ ಅರಸುಗಳು
  • ೧ ಪೂರ್ವಕಾಲವೃತ್ತಾಂತ
  • ೨ ಪೂರ್ವಕಾಲವೃತ್ತಾಂತ
  • ಎಜ್ರನು
  • ನೆಹೆಮಿಯ
  • ಎಸ್ತೇರಳು
  • ಯೋಬನು
  • ಕೀರ್ತನೆಗಳು
  • ಙ್ಞಾನೋಕ್ತಿಗಳು
  • ಪ್ರಸಂಗಿ
  • ಪರಮ ಗೀತ
  • ಯೆಶಾಯ
  • ಯೆರೆಮಿಯ
  • ಪ್ರಲಾಪಗಳು
  • ಯೆಹೆಜ್ಕೇಲನು
  • ದಾನಿಯೇಲನು
  • ಹೋಶೇ
  • ಯೋವೇಲ
  • ಆಮೋಸ
  • ಓಬದ್ಯ
  • ಯೋನ
  • ಮಿಕ
  • ನಹೂಮ
  • ಹಬಕ್ಕೂಕ್ಕ
  • ಚೆಫನ್ಯ
  • ಹಗ್ಗಾಯ
  • ಜೆಕರ್ಯ
  • ಮಲಾಕಿಯ
  • ಮತ್ತಾಯನು
  • ಮಾರ್ಕನು
  • ಲೂಕನು
  • ಯೋಹಾನನು
  • ಅಪೊಸ್ತಲರ ಕೃತ್ಯಗಳು
  • ರೋಮಾಪುರದವರಿಗೆ
  • ೧ ಕೊರಿಂಥದವರಿಗೆ
  • ೨ ಕೊರಿಂಥದವರಿಗೆ
  • ಗಲಾತ್ಯದವರಿಗೆ
  • ಎಫೆಸದವರಿಗೆ
  • ಫಿಲಿಪ್ಪಿಯವರಿಗೆ
  • ಕೊಲೊಸ್ಸೆಯವರಿಗೆ
  • ೧ ಥೆಸಲೊನೀಕದವರಿಗೆ
  • ೨ ಥೆಸಲೊನೀಕದವರಿಗೆ
  • ೧ ತಿಮೊಥೆಯನಿಗೆ
  • ೨ ತಿಮೊಥೆಯನಿಗೆ
  • ತೀತನಿಗೆ
  • ಫಿಲೆಮೋನನಿಗೆ
  • ಇಬ್ರಿಯರಿಗೆ
  • ಯಾಕೋಬನು
  • ೧ ಪೇತ್ರನು
  • ೨ ಪೇತ್ರನು
  • ೧ ಯೋಹಾನನು
  • ೨ ಯೋಹಾನನು
  • ೩ ಯೋಹಾನನು
  • ಯೂದನು
  • ಪ್ರಕಟನೆ
8
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
1 ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ, ಅವರು ನನ್ನ ಒಡಂಬಡಿಕೆಯನ್ನು ವಿಾರಿ ನನ್ನ ನ್ಯಾಯಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಅವನು ಹದ್ದಿನ ಹಾಗೆ ಕರ್ತನ ಆಲಯಕ್ಕೆ ವಿರುದ್ಧವಾಗಿ ಬರುತ್ತಾನೆ.
2 ಇಸ್ರಾಯೇಲಿ ನವರು--ನನ್ನ ದೇವರೇ, ನಾವು ನಿನ್ನನ್ನು ತಿಳಿದಿದ್ದೇವೆ ಎಂದು ನನಗೆ ಕೂಗುವರು.
3 ಇಸ್ರಾಯೇಲು ಒಳ್ಳೆಯ ಸಂಗತಿಯನ್ನು ತಳ್ಳಿಬಿಟ್ಟಿದೆ. ಶತ್ರುವು ಅವನನ್ನು ಹಿಂದಟ್ಟುವನು.
4 ಅವರು ಅರಸುಗಳನ್ನು ನೇಮಿಸಿದ್ದಾರೆ. ಆದರೆ ನನ್ನಿಂದಲ್ಲ, ಪ್ರಧಾನರನ್ನು ನೇಮಿಸಿದ್ದಾರೆ, ಅದು ನನಗೆ ತಿಳಿಯಲಿಲ್ಲ; ಅವರು ಕಡಿದುಬಿಡಲ್ಪಡುವ ಹಾಗೆ ತಮ್ಮ ಬೆಳ್ಳಿಯಿಂದಲೂ ತಮ್ಮ ಬಂಗಾರದಿಂದಲೂ ತಮಗೆ ವಿಗ್ರಹಗಳನ್ನು ಮಾಡಿಕೊಂಡಿದ್ದಾರೆ.
5 ಓ ಸಮಾ ರ್ಯವೇ, ನಿನ್ನ ಬಸವನನ್ನು ನಾನು ತಳ್ಳಿಹಾಕಿದ್ದೇನೆ; ನನ್ನ ಕೋಪವು ಅವರ ಮೇಲೆ ಉರಿಯುತ್ತದೆ; ಅವರು ನಿರಪರಾಧಿಗಳಾಗದೆ ಇರುವದು ಎಷ್ಟರ ವರೆಗೆ?
6 ಅದು ಇಸ್ರಾಯೇಲ್ಯರಿಂದಲೂ ಆಗಿದೆ; ಕೆಲಸಗಾರನು ಅದನ್ನು ಮಾಡಿದನು, ಆದ್ದರಿಂದ ಅದು ದೇವರಲ್ಲ; ಆದರೆ ಸಮಾರ್ಯದ ಕರುವು ಪುಡಿಪುಡಿಯಾಗಿ ಮುರಿಯಲ್ಪಡುವದು.
7 ಅವರು ಗಾಳಿಯನ್ನು ಬಿತ್ತಿ ದ್ದಾರೆ; ಬಿರುಗಾಳಿಯನ್ನು ಕೊಯ್ಯುತ್ತಾರೆ. ಅದಕ್ಕೆ ಕಾಂಡ ವಿಲ್ಲ; ಮೊಳಕೆಯು ಆಹಾರವನ್ನು ಕೊಡುವದಿಲ್ಲ. ಒಂದು ವೇಳೆ ಅದು ಕೊಟ್ಟರೂ ಪರಕೀಯರು ಅದನ್ನು ನುಂಗುತ್ತಾರೆ.
8 ಇಸ್ರಾಯೇಲು ನುಂಗಲ್ಪಟ್ಟಿದೆ; ಅವರು ಅನ್ಯಜನಾಂಗಗಳಲ್ಲಿ ಮೆಚ್ಚಿಕೆಯಿಲ್ಲದ ಪಾತ್ರೆಯ ಹಾಗೆ ಇದ್ದಾರೆ.
9 ಅವರು ಒಂಟಿಯಾದ ಕಾಡುಕತ್ತೆಯ ಹಾಗೆ ಅಶ್ಯೂರಕ್ಕೆ ಹೋಗಿದ್ದಾರೆ. ಎಫ್ರಾಯಾಮು ಮಿಂಡರಿಗೆ ಕೂಲಿ ಕೊಟ್ಟಿದೆ.
10 ಹೌದು, ಅವರು ಜನಾಂಗಗಳಲ್ಲಿ ಕೂಲಿ ಕೊಟ್ಟಿದ್ದರೂ ಅವರನ್ನು ನಾನು ಈಗ ಒಟ್ಟುಗೂಡಿ ಸುವೆನು; ಸ್ವಲ್ಪವಾದವರಲ್ಲಿ ಅವರು ಪ್ರಧಾನರು ಗಳ ಅರಸನ ಭಾರದಿಂದ ಕಷ್ಟಪಡುವರು.
11 ಎಫ್ರಾ ಯಾಮು ಪಾಪಕ್ಕಾಗಿ ಅನೇಕ ಬಲಿಪೀಠಗಳನ್ನು ಮಾಡಿ ದ್ದರಿಂದ, ಬಲಿಪೀಠಗಳು ಅವನ ಪಾಪಕ್ಕಾಗಿ ಇರುವವು.
12 ನಾನು ನನ್ನ ನ್ಯಾಯಪ್ರಮಾಣದ ದೊಡ್ಡ ಸಂಗತಿ ಗಳನ್ನು ಅವನಿಗೆ ಬರೆದಿದ್ದೇನೆ; ಆದರೆ ಅವುಗಳು ಅನ್ಯವಾದವುಗಳೆಂದು ಎಣಿಸಲ್ಪಟ್ಟಿವೆ.
13 ಅವರು ಯಜ್ಞದ ಮಾಂಸವನ್ನು ಬಲಿಯಾಗಿ ಅರ್ಪಿಸಿ ನನ್ನ ಕಾಣಿಕೆಗಳಿಂದ ಬಲಿಗಳನ್ನು ತಿನ್ನುತ್ತಾರೆ; ಆದರೆ ಕರ್ತನು ಅವುಗಳಿಗೆ ಮೆಚ್ಚುವದಿಲ್ಲ. ಈಗ ಅವರ ಅಕ್ರಮಗಳನ್ನು ಜ್ಞಾಪಕ ಮಾಡಿಕೊಂಡು ಅವರ ಪಾಪಗಳನ್ನು ವಿಚಾ ರಿಸುವನು; ಅವರು ಐಗುಪ್ತಕ್ಕೆ ಹಿಂದಿರುಗುವರು.
14 ಇಸ್ರಾಯೇಲು ತನ್ನ ನಿರ್ಮಾಣಿಕ ನನ್ನು ಮರೆತುಬಿಟ್ಟು ಆಲಯಗಳನ್ನು ಕಟ್ಟಿಕೊಂಡಿದೆ; ಯೆಹೂದವು ಸಹ ಕೋಟೆಯುಳ್ಳ ಪಟ್ಟಣಗಳನ್ನು ಹೆಚ್ಚು ಮಾಡಿಕೊಂಡಿದೆ; ಆದರೆ ನಾನು ಅದರ ಪಟ್ಟಣಗಳ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಅವುಗಳ ಅರಮನೆಗಳನ್ನು ನುಂಗಿಬಿಡುವದು.
‹ ›
© 2025 DailyManna.co.in. All rights reserved.